|| हरि: सर्वोत्तम वायु: जीवोत्तम ||

ಗದ್ದೆಗಿಳಿದು ನೇಜಿ ನೆಟ್ಟ ಪುತ್ತಿಗೆಶ್ರೀ

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಒಳಕಾಡು ವಾರ್ಡಿನಲ್ಲಿ ಸುಮಾರು 7 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಒಳಕಾಡು ವಾರ್ಡಿನ ಶಾರದಾ ಕಲ್ಯಾಣ ಮಂಟಪ ಬೀಡಿನಗುಡ್ಡೆ ರಸ್ತೆ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. 

ಕೊರೊನಾ ಲಾಕ್ ಡೌನ್ ಹೇರಲಾಗಿದ್ದರೂ ಆಹಾರ ವಸ್ತುಗಳಿಗೆ ಲಾಕ್ ಡೌನ್ ಹೇರಿಕೆ ಮಾಡಲಾಗಿಲ್ಲ. ಅಂತೆಯೇ ಕೃಷಿಗೂ ಲಾಕ್ ಡೌನ್ ಹೇರಿಲ್ಲ. ಕೊರೊನಾದಿಂದಾಗಿ ಬಹುತೇಕ ಮಂದಿ ಉದ್ಯೋಗ ಕಳೆದುಕೊಂಡಿರುವ ಈ ದಿನಗಳಲ್ಲಿ ಅವರಿಗೆ ಭರವಸೆ ನೀಡಬಲ್ಲ ಉದ್ಯೋಗವೆಂದರೆ ಕೃಷಿ. ಅದರಲ್ಲೂ ಸಾವಯವ ಕೃಷಿಗೆ ಉತ್ತಮ ಬೇಡಿಕೆ ಇದೆ. ಸಾವಯವ ಕೃಷಿ ಉತ್ಪನ್ನ ಆರೋಗ್ಯಕ್ಕೂ ಉತ್ತಮ. ತಮ್ಮ ಮುಂದಿನ ಪರ್ಯಾಯದಲ್ಲಿ ಸಾವಯವ ಪದಾರ್ಥ ಬಳಕೆಗೆ ಆದ್ಯತೆ ನೀಡಲಿದ್ದು, ಕೇದಾರೋತ್ಥಾನ ಟ್ರಸ್ಟ್ ಗೆ ಆದ್ಯತೆ ನೀಡಲಾಗುವುದು ಎಂದರು.

ಉದ್ಯಮಿ ನಾಗೇಶ್ ಹೆಗ್ಡೆ, ಶಾಸಕ ರಘುಪತಿ ಭಟ್ ಕೂಡಾ ಶ್ರೀಗಳೊಂದಿಗೆ ನೇಜಿ ನೆಟ್ಟರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬ್ಬಾರ್, ಉದ್ಯಮಿ ಸಂತೋಷ್ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್ ಇದ್ದರು