|| हरि: सर्वोत्तम वायु: जीवोत्तम ||

Dwadasha Stotra - Jagadeka Karana

ವಿಶ್ವಗುರು ಶ್ರೀ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಉಪೇಂದ್ರ ತೀರ್ಥರ ಪರಂಪರೆಯಲ್ಲಿ ಬಂದ, ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ವಿಠ್ಠಲನ ಪಾದಪದ್ಮಾರಾದಕರಾದ ವಿಶ್ವವಂದ್ಯ ಉಡುಪೀಶ ಕೃಷ್ಣನ ಮೂರು ಪರ್ಯಾಯ ಮಹೋತ್ಸವವನ್ನು ವೈಭವದಿಂದ ಪೂರೈಸಿದ ಉಡುಪಿ ಶ್ರೀ ಪುತ್ತಿಗೆ ಹಿರಿಯ ಮಠಾಧೀಶರಾದ ನಮ್ಮ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಷಷ್ಠ್ಯಬ್ಧದ ಶುಭಾವಸರದಲ್ಲಿ ಜಗದ್ಗುರು ಆನಂದತೀರ್ಥರು ಉಡುಪಿ ಕೃಷ್ಣನನ್ನು ಹಾಡಿ ಕೊಂಡಾಡಿದ ದ್ವಾದಶ ಸ್ತೋತ್ರದ ಧ್ವನಿಸುರುಳಿಯನ್ನು ಪುತ್ತಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ..

ಈ ಪದ್ಯದ ರಾಗ ಸಂಯೋಜನೆಯನ್ನು ನಮ್ಮ ಮಠದ ವಿಶೇಷ ಅಭಿಮಾನಿಗಳಾದ ನಮ್ಮವರೇ ಆದ ಶ್ರೀ ವಿಶ್ವೇಶ ಭಟ್ ಹಾಗೂ ಅವರ ತಂಡದವರು ಮಾಡಿದ್ದಾರೆ. ಸಂಘದ ಪರವಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.. ಎಲ್ಲರೂ ಕೇಳಿ ಆನಂದ ತುಲ್ಯರಾಗಿ ಪುನೀತರಾಗಿ ಪೂರ್ಣಪ್ರಜ್ಞರ ಅಂತರ್ಯಾಮಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ..